Beloved Yoga

Beloved Yoga Yoga Practitioner & Certified Instructor �
(Beginner-Intermediate & Advanced)
DM for online classes

Individual & Group classes available for Beginners, Intermediate & Advanced Yoga

Contact for more details.

29/08/2026

ಮೊನ್ನೆ ಟಿವಿ.ಯಲ್ಲಿ ಒಂದು ಹಾಸ್ಯ ಕಾರ್ಯಕ್ರಮ ನೋಡುತ್ತಿದ್ದೆ. ವೇದಿಕೆ ಮೇಲಿನವ ಹಾಸ್ಯದ ಹೆಸರಿನಲ್ಲಿ ಹೇಳಿದ ಜೋಕು :

ಹೆಂಡತಿ ಹೇಳ್ತಾಳೆ - "ರೀ, ನಮ್ ಮದುವೆ ಮಾಡಿಸಿದ ಪೂಜಾರಿ ಆಕ್ಸಿಡೆಂಟ್ ಅಲ್ಲಿ ಸತ್ತು ಹೋದನಂತೆ ಪಾಪ"

ಅದಕ್ಕೆ ಗಂಡ ಹೇಳ್ತಾನೆ - "ಮಾಡಿದ ಪಾಪ ಎಲ್ಲಿಗೆ ಹೋಗುತ್ತೆ ಹೇಳು..."

ಸಾವಿರ ಜನ ಕುಳಿತಿದ್ದ ಸಭಾಂಗಣದಲ್ಲಿ ಕಹಕಹ ನಗು. ಚಪ್ಪಾಳೆ. ಸೀಟಿ. ನಾನು ಮಾತ್ರ ನಗಲಿಲ್ಲ. ನನ್ನೊಳಗೆ ಏನೋ ಚುಚ್ಚಿದಂತಾಯ್ತು. ಅದು ಜೋಕ್ ಆಗಿರಲಿಲ್ಲ. ಅದು ನಮ್ಮದೇ ಬೇರಿನ ಮೇಲೆ ಮಾಡಿದ ವ್ಯಂಗ್ಯದ ಗಾಯವಾಗಿತ್ತು. ಹಾಸ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ಹೊಸ ಅಸಹಿಷ್ಣುತೆ ಯಾವಾಗ ಶುರುವಾಯಿತು?

ಒಬ್ಬ ಪುರೋಹಿತನನ್ನು ನೋಡಿದರೆ ಇವತ್ತು ನಮ್ಮ ಜನಕ್ಕೆ ತಮಾಷೆಯ ವಸ್ತು ಕಾಣುತ್ತಾನೆ. ಅವನ ಜನಿವಾರ, ಅವನ ಶಿಖೆ, ಅವನ ಮಂತ್ರ, ಅವನ ಜೀವನವೇ ಒಂದು ಜೋಕ್ ಆಗಿ ಬಿಟ್ಟಿದೆ. ಹಾಸ್ಯ ಕಾರ್ಯಕ್ರಮಗಳಲ್ಲಿ ಪುರೋಹಿತ ಅಂದರೆ ಒಬ್ಬ ಹೊಟ್ಟೆಬಾಕ, ದುರಾಸೆಯ, ಸುಳ್ಳುಗಾರ. ಅವನು ಬಂದರೆ ಸಾಕು, ಹಿಂದೆ ಹಾಸ್ಯದ ಹಿನ್ನೆಲೆ ಸಂಗೀತ ಶುರುವಾಗುತ್ತದೆ. ಸಾವಿರ ಜನ ಚಪ್ಪಾಳೆ ತಟ್ಟುತ್ತಾರೆ. ಆ ಚಪ್ಪಾಳೆಯ ಶಬ್ದದಲ್ಲಿ ನಮಗೆ ಕೇಳಿಸದ ಒಂದು ನಿಟ್ಟುಸಿರಿದೆ. ಅದು ಆ ಸಂಸ್ಕೃತಿಯ ನಿಟ್ಟುಸಿರು, ಅದು ಸಾವಿರಾರು ವರ್ಷಗಳ ಪರಂಪರೆಯ ನಿಟ್ಟುಸಿರು.

ಒಂದು ಮಾತು ಹೇಳಿ ನೋಡೋಣ. ಹಾಸ್ಯದ ಹೆಸರಿನಲ್ಲಿ ಅನ್ಯ ಕೋಮುಗಳ, ಅನ್ಯ ಮತಗಳ ಒಂದು ಆಚರಣೆಯ ಬಗ್ಗೆ, ಒಂದು ಉಡುಪಿನ ಬಗ್ಗೆ, ಒಬ್ಬ ಧರ್ಮಗುರುವಿನ ಬಗ್ಗೆ ಒಂದೇ ಒಂದು ಜೋಕ್ ಮಾಡಿ ನೋಡಿ. ಮರುದಿನ ಏನಾಗುತ್ತದೆ ಎಂದು ನಿಮಗೆ ಗೊತ್ತಿದೆ. ಆ ವೇದಿಕೆಯೇ ಇರುವುದಿಲ್ಲ, ಆ ಕಲಾವಿದನೇ ಇರುವುದಿಲ್ಲ. ಆ ಭಯ, ಆ ಎಚ್ಚರಿಕೆ ಬರೀ ಸನಾತನದ ವಿಷಯದಲ್ಲಿ ಮಾತ್ರ ಯಾಕೆ ಇಲ್ಲ?

ಏಕೆಂದರೆ ಹಿಂದೂ ಸಹಿಷ್ಣು. ಅವನು ನಗುತ್ತಾನೆ. ಅವನು ತನ್ನ ಮೇಲಿನ ವ್ಯಂಗ್ಯವನ್ನೂ ನಗುವಿನಲ್ಲಿ ಅರಗಿಸಿಕೊಳ್ಳುತ್ತಾನೆ. ಈ ಸಹಿಷ್ಣುತೆಯನ್ನೇ ಇವತ್ತು ದೌರ್ಬಲ್ಯ ಎಂದುಕೊಂಡು ಬಿಟ್ಟಿದ್ದಾರೆ.

ಇನ್ನು ಮದುವೆಯ ವಿಷಯಕ್ಕೆ ಬರೋಣ. ಮದುವೆ ಮಂಟಪದಲ್ಲಿ ಪುರೋಹಿತರು ವಧು-ವರರನ್ನು ಹೊರಗೆ ಕರೆದುಕೊಂಡು ಹೋಗಿ "ಅರಂಧತಿ ನಕ್ಷತ್ರ ನೋಡಿ" ಎನ್ನುತ್ತಾರೆ. ಆ ಕ್ಷಣ ಸಭೆಯಲ್ಲಿ ಸಣ್ಣ ನಗು, ಪಿಸುಮಾತು ಶುರುವಾಗುತ್ತದೆ - "ಇವತ್ತಿಂದ ಸುಳ್ಳು ಹೇಳೋಕೆ ಶುರು, ನಕ್ಷತ್ರನೇ ಕಾಣಿಸ್ತಿಲ್ಲ, ಇವನು ಎಲ್ಲಿ ತೋರಿಸ್ತಾನೆ ನೋಡೋಣ." ಅವರಿಗೆ ಗೊತ್ತಿಲ್ಲ ಆ ನಕ್ಷತ್ರ ತೋರಿಸುವ ಹಿಂದಿನ ವಿಜ್ಞಾನ, ತತ್ವ.

ಅರಂಧತಿ ಯಾರು? ವಸಿಷ್ಠರ ಪತ್ನಿ. ಸಪ್ತರ್ಷಿ ಮಂಡಲದಲ್ಲಿ ವಸಿಷ್ಠ ನಕ್ಷತ್ರದ ಪಕ್ಕದಲ್ಲಿ ಒಂದು ಸಣ್ಣ, ಮಸುಕಾದ ನಕ್ಷತ್ರ. ಬರಿಗಣ್ಣಿಗೆ ಕಷ್ಟದಲ್ಲಿ ಕಾಣುವ ನಕ್ಷತ್ರ. ಆಕಾಶದಲ್ಲಿ ನೂರಾರು ಪ್ರಕಾಶಮಾನವಾದ ನಕ್ಷತ್ರಗಳಿವೆ, ಆದರೆ ನಮ್ಮ ಋಷಿಗಳು ದಾಂಪತ್ಯಕ್ಕೆ ಮಾದರಿಯಾಗಿ ಆ ಮಸುಕಾದ ನಕ್ಷತ್ರವನ್ನೇ ಯಾಕೆ ಆರಿಸಿಕೊಂಡರು? ಅದು ಒಂದು ಪ್ರತೀಕ. "ನೋಡು ಮಗಳೇ, ಆಕಾಶದಲ್ಲಿ ಎಷ್ಟೇ ಪ್ರಕಾಶಮಾನವಾದ ನಕ್ಷತ್ರಗಳಿದ್ದರೂ ವಸಿಷ್ಠ ಅರಂಧತಿಯನ್ನು ಬಿಟ್ಟು ಹೋಗುವುದಿಲ್ಲ, ಅರಂಧತಿ ವಸಿಷ್ಠನನ್ನು ಬಿಟ್ಟು ಹೋಗುವುದಿಲ್ಲ. ನಿಮ್ಮ ದಾಂಪತ್ಯವೂ ಹಾಗೆಯೇ ಇರಬೇಕು. ಜಗತ್ತಿನ ಆಕರ್ಷಣೆಗಳ ನಡುವೆಯೂ ಒಬ್ಬರನ್ನೊಬ್ಬರು ಬಿಟ್ಟು ಹೋಗಬೇಡಿ. ಸಣ್ಣದಾಗಿ ಕಾಣಿಸಿದರೂ, ನಿಮ್ಮ ಬಂಧ ಆಕಾಶದಷ್ಟು ಸತ್ಯವಾಗಿರಲಿ" ಎಂಬ ದೊಡ್ಡ ಸಂದೇಶವಿದೆ.

ಇದು ಸುಳ್ಳು ಹೇಳಲು ಕಲಿಸುವ ಕ್ರಿಯೆಯೇ? ಅಲ್ಲ, ಸತ್ಯದ ಜೊತೆ ಬದುಕಲು ಕಲಿಸುವ ಕ್ರಿಯೆ. ಇನ್ನು ಯಾರಾದರೂ ಸ್ವಲ್ಪ ಜೋರಾಗಿ, ಕೋಪದಲ್ಲಿ ಮಾತಾಡಿದರೆ ನಮ್ಮ ಜನ ಹೇಳುವ ಮಾತು - "ಏಯ್ ಸಂಸ್ಕೃತ ಮಾತಾಡಬೇಡ" ಯೋಚಿಸಿ, ಯಾವಾಗ ಸಂಸ್ಕೃತ ಕೆಟ್ಟ ಪದಗಳ ಭಾಷೆಯಾಯಿತು? ಸಂಸ್ಕೃತ ಎಂದರೆ ಸಂಸ್ಕರಿಸಲ್ಪಟ್ಟದ್ದು, ಪರಿಪೂರ್ಣವಾಗಿಸಲ್ಪಟ್ಟದ್ದು ಎಂದರ್ಥ. ಜಗತ್ತಿನ ಅತ್ಯಂತ ವೈಜ್ಞಾನಿಕ ಭಾಷೆ, ಕಂಪ್ಯೂಟರ್ ಗೆ ಅತ್ಯಂತ ಯೋಗ್ಯವಾದ ಭಾಷೆ ಎಂದು NASA ವಿಜ್ಞಾನಿಗಳೇ ಹೇಳಿದ ಭಾಷೆ. ನಮ್ಮ ವೇದ, ಉಪನಿಷತ್ತು, ಆಯುರ್ವೇದ, ಗಣಿತ, ಖಗೋಳಶಾಸ್ತ್ರ ಎಲ್ಲವನ್ನೂ ಹೊತ್ತ ಭಾಷೆ. ತಾಯಿಯ ಮಡಿಲಿನಂತಹ ಭಾಷೆ.

ಇವತ್ತು ಆ ಭಾಷೆಯ ಹೆಸರು ಬೈಗುಳವಾಗಿದೆ. ಇದು ನಮ್ಮ ಸೋಲು ಅಲ್ಲವೇ?

ಮತ್ತೊಂದು ಮಾತು - ಯಾರಾದರೂ ನಮ್ಮ ಧರ್ಮದ, ಸಂಸ್ಕೃತಿಯ, ಇತಿಹಾಸದ ಬಗ್ಗೆ ಸ್ವಲ್ಪ ಮಾತಾಡಲು ಹೋದರೆ ಸಾಕು, ಪಕ್ಕದಲ್ಲಿರುವವನು ವ್ಯಂಗ್ಯವಾಗಿ ಹೇಳುತ್ತಾನೆ - "ಅಯ್ಯೋ ಪುರಾಣ ಶುರು ಮಾಡಿದ"

ಪುರಾಣ ಅಂದರೆ ಏನು ಎಂದು ಆ ಹೇಳುವವನಿಗೆ ಗೊತ್ತಿದೆಯಾ? ಪುರಾಣ ಅಂದರೆ ಸುಳ್ಳು ಕಥೆ ಅಲ್ಲ. ಪುರಾ ನವಂ ಭವತಿ ಇತಿ ಪುರಾಣಂ. ಹಿಂದೆ ನಡೆದಿದ್ದರೂ ಇಂದಿಗೂ ಹೊಸದಾಗಿ ಕಾಣುವುದು ಪುರಾಣ. ನಮ್ಮ ಇತಿಹಾಸವನ್ನು, ಭೂಗೋಳವನ್ನು, ಖಗೋಳವನ್ನು, ನೀತಿಯನ್ನು, ಜೀವನ ಮೌಲ್ಯಗಳನ್ನು ಕಥೆಯ ರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸುವ ಅದ್ಭುತ ತಂತ್ರಜ್ಞಾನವೇ ಪುರಾಣ. ಪುರಾಣ ಹೇಳುವುದು ಅಂದರೆ ಟೈಮ್ ಪಾಸ್ ಕಥೆ ಹೇಳುವುದಲ್ಲ, ಅದು ನಮ್ಮ ಬೇರನ್ನು ನಮಗೆ ಪರಿಚಯಿಸುವ ಕೆಲಸ.

ಇವತ್ತು ಟ್ರೆಂಡ್ ಬದಲಾಗಿದೆ. ದೇವರನ್ನು, ಪೂಜಾರಿಯನ್ನು, ಮಂತ್ರವನ್ನು, ಹಣೆಯನ್ನು, ಬಳೆಯನ್ನು, ಸಂಸ್ಕೃತವನ್ನು ತಮಾಷೆ ಮಾಡಿದರೆ ಅವನು "ಪ್ರಗತಿಪರ", "ಬೋಲ್ಡ್", "ಇಂಟೆಲೆಕ್ಚುಯಲ್". ಅದನ್ನೇ ರಕ್ಷಣೆ ಮಾಡಲು ಹೋದವನು "ಮೌಢ್ಯ", "ಹಿಂದುಳಿದ". ನಿಜವಾದ ಪ್ರಗತಿಪರತೆ ಎಂದರೆ ಏನು? ಇನ್ನೊಬ್ಬರ ನಂಬಿಕೆಯನ್ನು ಗೇಲಿ ಮಾಡುವುದಾ? ಅಥವಾ ಎಲ್ಲರ ನಂಬಿಕೆಯನ್ನು ಗೌರವಿಸುತ್ತಾ, ತನ್ನ ನಂಬಿಕೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದಾ?

ಹಾಸ್ಯ ಬೇಕು. ನಮ್ಮ ಜೀವನದಲ್ಲಿ ನಗು ಅತ್ಯಗತ್ಯ. ಆದರೆ ಆ ನಗು ಇನ್ನೊಬ್ಬರ ಅಸ್ತಿತ್ವವನ್ನು ಅಣಕಿಸುವುದರ ಮೇಲೆ ಕಟ್ಟಬಾರದು. ಅದರಲ್ಲೂ ಸಾವಿರಾರು ವರ್ಷಗಳಿಂದ ಈ ನೆಲವನ್ನು, ಈ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಪುರೋಹಿತ ಸಮುದಾಯವನ್ನು ಹಾಸ್ಯದ ವಸ್ತು ಮಾಡುವುದು ಎಷ್ಟು ಸರಿ? ಆ ಪುರೋಹಿತ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ತಣ್ಣೀರಲ್ಲಿ ಸ್ನಾನ ಮಾಡಿ, ಸಂಧ್ಯಾವಂದನೆ ಮಾಡಿ, ನಿಮ್ಮ ಮನೆಗೆ ಬಂದು ನಿಮ್ಮ ಮಗುವಿಗೆ ನಾಮಕರಣ ಮಾಡಿ, ನಿಮ್ಮ ಮದುವೆಯನ್ನು ಮಾಡಿಸಿ, ನಿಮ್ಮ ತಂದೆಯ ಅಂತ್ಯಕ್ರಿಯೆಯಲ್ಲೂ ನಿಮ್ಮ ಜೊತೆ ಇರುತ್ತಾನೆ. ಅವನಿಗೆ ಸಂಬಳವಿಲ್ಲ, ಪಿಂಚಣಿ ಇಲ್ಲ, ಭದ್ರತೆ ಇಲ್ಲ. ಇದೆ ಅವನ ವೃತ್ತಿ, ಅವನ ಬದುಕು.

ಆ ಬದುಕನ್ನು ಗೇಲಿ ಮಾಡುವ ಮೊದಲು ಒಂದು ಕ್ಷಣ ಯೋಚಿಸಿ. ನಾವು ನಮ್ಮ ಮಕ್ಕಳಿಗೆ ಏನು ಹೇಳಿಕೊಡುತ್ತಿದ್ದೇವೆ? ಅರಂಧತಿ ನಕ್ಷತ್ರ ಸುಳ್ಳು, ಸಂಸ್ಕೃತ ಬೈಗುಳ, ಪುರಾಣ ಟೈಮ್ ಪಾಸ್, ಪೂಜಾರಿ ಜೋಕರ್ ಎಂದು ಹೇಳಿಕೊಟ್ಟರೆ, ನಾಳೆ ಅವರಿಗೆ ತಮ್ಮ ಹೆಸರಿನ ಅರ್ಥವೂ ಗೊತ್ತಾಗುವುದಿಲ್ಲ, ತಮ್ಮ ಹಬ್ಬದ ಮಹತ್ವವೂ ಗೊತ್ತಾಗುವುದಿಲ್ಲ. ಬೇರಿಲ್ಲದ ಮರ ಎಷ್ಟು ದಿನ ಹಸಿರಾಗಿರುತ್ತದೆ? ಇದು ಯಾರನ್ನೋ ದ್ವೇಷಿಸುವ ಬರಹವಲ್ಲ. ಇದು ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಬರಹ. ದಯವಿಟ್ಟು ಹಾಸ್ಯದ ಹೆಸರಿನಲ್ಲಿ ನಮ್ಮ ಬೇರುಗಳನ್ನೇ ಕೊಚ್ಚಿಕೊಳ್ಳಬೇಡಿ. ಪ್ರಶ್ನಿಸಿ, ತಪ್ಪಿದ್ದರೆ ಖಂಡಿಸಿ, ಆದರೆ ಅಣಕಿಸಬೇಡಿ, ಅವಮಾನಿಸಬೇಡಿ.

#ಸನಾತನ ಎಂದರೆ ಒಂದು ಮತವಲ್ಲ, ಅದು ಬದುಕುವ ವಿಧಾನ. ಅದು ನಗುವನ್ನು ಸಹಿಸಿಕೊಳ್ಳುತ್ತದೆ, ಆದರೆ ನಗುವಿನ ವಸ್ತುವಾಗಲು ಹುಟ್ಟಿದ್ದಲ್ಲ. ಈ ಮನಸ್ಥಿತಿಗೆ ಅಂತ್ಯ ಯಾವಾಗ? ಅದು ಬೇರೆಯವರು ಬಂದು ಮಾಡಿಕೊಡುವುದಿಲ್ಲ. ನಾವು ಚಪ್ಪಾಳೆ ತಟ್ಟುವುದನ್ನು ನಿಲ್ಲಿಸಿದಾಗಲೇ ಅಂತ್ಯವಾಗುತ್ತದೆ.

-- ಮ.ನಾ.ಉಡುಪ, ಮಂಡ್ಯ

👆A lot of us are like that elephant in the image Trying very hard to “help” people… without first understanding what act...
10/05/2026

👆A lot of us are like that elephant in the image

Trying very hard to “help” people… without first understanding what actually helps them.

Sometimes at work, in relationships, parenting, leadership, or friendships, we hand out oxygen cylinders to fish 🐠😂

Not because we are bad people.
But because we assume: “What works for me must work for everyone.”

The elephant genuinely wants to save the fish.
But the elephant understands life through lungs, not gills.

And that’s what happens many times in life.

We advise people based on our experiences.
Judge them based on our strengths.
And expect them to heal, grow, think, cope, or succeed the way we do.

Real wisdom is not in forcing people into our world.
It is in understanding theirs first.

Before advising…
Before correcting…
Before judging…
Before trying to change someone…

Let’s pause and ask: “Am I helping them…
or just helping them become more like me?”

Empathy is not agreeing with everyone.
It is understanding that different people breathe differently 🌿

12/03/2026

12.3.2026 ರಂದು ಇರುವ "ಅಗ್ನಿಹೋತ್ರ ದಿನ"ದ ನಿಮಿತ್ತ ವಿಶೇಷ ಲೇಖನ

☀ ಅಗ್ನಿಹೋತ್ರದ ರಕ್ಷಣಾತ್ಮಕ ಶಕ್ತಿಗೆ ಜೀವಂತ ಸಾಕ್ಷಿ : 1984ರ ಭೋಪಾಲ್ ಅನಿಲ ದುರಂತ

ಮನುಕುಲದ ಇತಿಹಾಸದಲ್ಲಿ ಅತ್ಯಂತ ಭೀಕರ ಕೈಗಾರಿಕಾ ವಿಪತ್ತು ಎಂದರೆ ಅದು 1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತ. ಇಡೀ ನಗರವೇ ಮೃತ್ಯುಪಾಶಕ್ಕೆ ಸಿಲುಕಿದ್ದ ಆ ಕರಾಳ ರಾತ್ರಿಯಲ್ಲಿ, ವಿಜ್ಞಾನಕ್ಕೂ ನಿಲುಕದ ಅದ್ಭುತವೊಂದು ಸಂಭವಿಸಿತು. ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಅತ್ಯಂತ ಸಮೀಪದಲ್ಲಿದ್ದರೂ, ಕೇವಲ ಅಗ್ನಿಹೋತ್ರದ ಪ್ರಭಾವದಿಂದ ಒಂದು ಇಡೀ ಕುಟುಂಬವು ಯಾವುದೇ ಹಾನಿಯಿಲ್ಲದೆ ಪಾರಾಯಿತು. ಈ ಲೇಖನವು ಆ ಘಟನೆಯ ಸತ್ಯಾಸತ್ಯತೆ ಮತ್ತು ಅದರ ಹಿಂದಿನ ಅತೀಂದ್ರಿಯ ವಿಜ್ಞಾನವನ್ನು ವಿವರಿಸುತ್ತದೆ.

1. ಹಿನ್ನೆಲೆ: ಸಾವಿನ ದರ್ಶನ ಮಾಡಿಸಿದ ಆ ಕರಾಳ ರಾತ್ರಿ

1984ರ ಡಿಸೆಂಬರ್ 2 ಮತ್ತು 3ರ ಮಧ್ಯರಾತ್ರಿ, ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ 'ಮಿಥೈಲ್ ಐಸೊಸೈನೇಟ್' (MIC) ಎಂಬ ಅತ್ಯಂತ ವಿಷಕಾರಿ ಅನಿಲವು ಸೋರಿಕೆಯಾಯಿತು. ಈ ಅನಿಲವು ಗಾಳಿಯಲ್ಲಿ ವೇಗವಾಗಿ ಹರಡಿ, ಸಾವಿರಾರು ಜನರನ್ನು ನಿದ್ರೆಯಲ್ಲೇ ಬಲಿ ತೆಗೆದುಕೊಂಡಿತು. ಉಸಿರುಗಟ್ಟುವಿಕೆ, ಕಣ್ಣು ಉರಿ ಮತ್ತು ವಾಂತಿಯಿಂದ ಜನರು ರಸ್ತೆ ರಸ್ತೆಗಳಲ್ಲಿ ಬಿದ್ದು ಮೃತಪಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಾರ್ಖಾನೆಯ ಸಮೀಪದ ಇಟವಾರ ಎಂಬ ಪ್ರದೇಶದಲ್ಲಿ ವಾಸವಾಗಿದ್ದ ಶಿಕ್ಷಕ ಶ್ರೀ ಸೋಹನ್ ಲಾಲ್ ಕುಶ್ವಾಹ ಅವರ ಕುಟುಂಬವು ಈ ದುರಂತದ ನಡುವೆ ಸಿಲುಕಿತ್ತು.

2. ಕುಶ್ವಾಹ ಕುಟುಂಬಕ್ಕೆ ಎದುರಾದ ಮೃತ್ಯುವಿನ ಭೀತಿ

ಮಧ್ಯರಾತ್ರಿ ಸುಮಾರು 1:30ರ ಸುಮಾರಿಗೆ, ಸೋಹನ್ ಲಾಲ್ ಅವರ ಪತ್ನಿ ಸೌ. ತ್ರಿವೇಣಿ ಅವರಿಗೆ ಇದ್ದಕ್ಕಿದ್ದಂತೆ ತೀವ್ರವಾದ ಕೆಮ್ಮು ಮತ್ತು ವಾಂತಿ ಕಾಣಿಸಿಕೊಂಡಿತು. ಕೂಡಲೇ ಎಚ್ಚರಗೊಂಡ ಅವರು ಮನೆಯಲ್ಲಿದ್ದ ಎಲ್ಲರಿಗೂ ಅಸ್ವಸ್ಥತೆ ಶುರುವಾಗಿರುವುದನ್ನು ಗಮನಿಸಿದರು. ಮಕ್ಕಳ ಕಣ್ಣುಗಳು ಕೆಂಪಾಗಿ ಉರಿಯುತ್ತಿದ್ದವು ಮತ್ತು ಉಸಿರಾಡಲು ಕಷ್ಟವಾಗುತ್ತಿತ್ತು. ಹೊರಗಡೆ ಜನರ ಕಿರುಚಾಟ ಮತ್ತು "ವಿಷಾನಿಲ ಸೋರಿಕೆಯಾಗುತ್ತಿದೆ, ಪ್ರಾಣ ಉಳಿಸಿಕೊಳ್ಳಲು ಓಡಿ!" ಎಂಬ ಕೂಗು ಕೇಳಿಬರುತ್ತಿತ್ತು.

ನೆರೆಹೊರೆಯವರೆಲ್ಲರೂ ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ಓಡುತ್ತಿದ್ದರು. ಕುಶ್ವಾಹ ಕುಟುಂಬಕ್ಕೂ ಅವರ ಹಿತೈಷಿಗಳು ತಕ್ಷಣವೇ ಮನೆಯಿಂದ ಹೊರಬರಲು ಸೂಚಿಸಿದರು. ಆದರೆ, ಸೋಹನ್ ಲಾಲ್ ಅವರು ಆ ಸಮಯದಲ್ಲಿ ಒಂದು ಧೈರ್ಯದ ನಿರ್ಧಾರ ಮಾಡಿದರು. ಅವರು ತಮ್ಮ ಮನೆಯಲ್ಲೇ ಇದ್ದು, ಶ್ರದ್ಧೆಯಿಂದ ಅಗ್ನಿಹೋತ್ರ ಮಾಡಲು ನಿರ್ಧರಿಸಿದರು.

3. ಅಗ್ನಿಹೋತ್ರದ ಪ್ರಯೋಗ ಮತ್ತು ಪವಾಡದಂತಹ ಚೇತರಿಕೆ

ಸೋಹನ್ ಲಾಲ್ ಕುಶ್ವಾಹ ಅವರು ಅಗ್ನಿಹೋತ್ರದ ಮಹತ್ವವನ್ನು ಮೊದಲೇ ತಿಳಿದಿದ್ದರು. ಅನಿಲ ದುರಂತದ ತೀವ್ರತೆಯ ನಡುವೆಯೂ ಅವರು ಅಗ್ನಿಹೋತ್ರದ ಪಾತ್ರೆಯನ್ನು ಸಿದ್ಧಪಡಿಸಿ, ಹಸುವಿನ ಬೆರಣಿ ಮತ್ತು ತುಪ್ಪದ ಸಹಾಯದಿಂದ ಅಗ್ನಿಯನ್ನು ಪ್ರಜ್ವಲಿಸಿದರು. ಸರಿಯಾದ ಮಂತ್ರಗಳೊಂದಿಗೆ ಅಕ್ಕಿಯ ಆಹುತಿಯನ್ನು ನೀಡಿದರು.

ಕೇವಲ 20 ನಿಮಿಷಗಳಲ್ಲಿ ನಡೆದ ಪವಾಡ: ಅಗ್ನಿಹೋತ್ರದಿಂದ ಹೊರಬಂದ ಪವಿತ್ರ ಹೊಗೆಯು ಮನೆಯ ಮೂಲೆ ಮೂಲೆಗೂ ಹರಡಿತು. ಆಶ್ಚರ್ಯವೆಂದರೆ, ಕೇವಲ 20 ನಿಮಿಷಗಳಲ್ಲಿ ತ್ರಿವೇಣಿ ಅವರ ವಾಂತಿ ಮತ್ತು ಕೆಮ್ಮು ಸಂಪೂರ್ಣವಾಗಿ ನಿಂತುಹೋಯಿತು. ಮಕ್ಕಳ ಕಣ್ಣು ಉರಿ ಕಡಿಮೆಯಾಗಿ, ಅವರೆಲ್ಲರೂ ನಿರಾಳವಾಗಿ ಉಸಿರಾಡಲು ಪ್ರಾರಂಭಿಸಿದರು. ಮನೆಯ ಒಳಗೆ ವಿಷಾನಿಲದ ಯಾವುದೇ ಲಕ್ಷಣಗಳೂ ಉಳಿಯಲಿಲ್ಲ. ಇಡೀ ನಗರವೇ ಚಿತಾಗಾರವಾಗಿದ್ದಾಗ, ಕುಶ್ವಾಹ ಕುಟುಂಬದವರು ಮಾತ್ರ ಸುರಕ್ಷಿತವಾಗಿದ್ದರು.

4. ಅಗ್ನಿಹೋತ್ರವು ಅನಿಲವನ್ನು ಹೇಗೆ ನಿಯಂತ್ರಿಸಿತು? (ಸೂಕ್ಷ್ಮ ವಿಜ್ಞಾನ)

ಈ ಘಟನೆಯು ಕೇವಲ ಕಾಕತಾಳೀಯವಲ್ಲ, ಇದರ ಹಿಂದೆ ಗಾಢವಾದ ವಿಜ್ಞಾನವಿದೆ. ಅಗ್ನಿಹೋತ್ರವು ವಿಷಾನಿಲದ ಪ್ರಭಾವವನ್ನು ಹೇಗೆ ಕಡಿಮೆ ಮಾಡಿತು ಎಂಬುದಕ್ಕೆ ಈ ಕೆಳಗಿನ ಕಾರಣಗಳನ್ನು ನೀಡಬಹುದು:

• ವಿಷ ನಿರ್ಮೂಲನ ವಲಯ (Neutralization Zone): ಮಿಥೈಲ್ ಐಸೊಸೈನೇಟ್ (MIC) ನಂತಹ ವಿಷಕಾರಿ ಅನಿಲದ ಅಣುಗಳು ಅಗ್ನಿಹೋತ್ರದ ಹೊಗೆಯ ಸಂಪರ್ಕಕ್ಕೆ ಬಂದಾಗ ಅವುಗಳ ರಾಸಾಯನಿಕ ರಚನೆಯಲ್ಲಿ ಬದಲಾವಣೆಯಾಗಿ, ಅವುಗಳ ವಿಷಕಾರಿತ್ವವು ನಾಶವಾಗುತ್ತದೆ. ಅಗ್ನಿಹೋತ್ರದ ಧೂಮವು 'ಅಂಟಿ-ಟಾಕ್ಸಿಕ್' ಆಗಿ ಕಾರ್ಯನಿರ್ವಹಿಸುತ್ತದೆ.

• ರಕ್ಷಣಾ ಕವಚದ ನಿರ್ಮಾಣ: ಅಗ್ನಿಹೋತ್ರದಿಂದ ಉತ್ಪನ್ನವಾಗುವ ತೇಜೋಮಯ ಲಹರಿಗಳು ಮನೆಯ ಸುತ್ತಲೂ ಸುಮಾರು 10 ಅಡಿಗಳಷ್ಟು ವ್ಯಾಪ್ತಿಯಲ್ಲಿ ಒಂದು 'ಸೂಕ್ಷ್ಮ ರಕ್ಷಣಾ ಕವಚ'ವನ್ನು ನಿರ್ಮಿಸುತ್ತವೆ. ಈ ಕವಚವು ಹೊರಗಿನಿಂದ ಬರುವ ಅಶುದ್ಧ ಅನಿಲ ಮತ್ತು ನಕಾರಾತ್ಮಕ ಅಲೆಗಳನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.

• ಪ್ರಾಣಶಕ್ತಿಯ ವೃದ್ಧಿ: ಅಗ್ನಿಹೋತ್ರವು ವಾತಾವರಣದಲ್ಲಿನ ಆಮ್ಲಜನಕ ಮತ್ತು ಪ್ರಾಣಶಕ್ತಿಯನ್ನು ಶುದ್ಧೀಕರಿಸುವುದರಿಂದ, ಶ್ವಾಸಕೋಶದ ಮೇಲೆ ಅನಿಲದ ಪ್ರಭಾವ ಉಂಟಾಗಿದ್ದರೂ ಅದು ಶೀಘ್ರವಾಗಿ ಗುಣಮುಖವಾಗಲು ಸಹಾಯ ಮಾಡುತ್ತದೆ.

ಈ ಪೋಸ್ಟ್ ಹಾಕಿದ ನಂತರ ಅನೇಕ ಆಸಕ್ತರು ಅಗ್ನಿಹೋತ್ರ ಎಂದರೇನು ? ಅದನ್ನು ಹೇಗೆ ಮಾಡಬೇಕು ? ಯಾವ ಸಮಯದಲ್ಲಿ ಮಾಡಬೇಕು ? ಮಾಡುವ ಯೋಗ್ಯ ವಿಧಾನ ಯಾವುದು ? ಯಾವ ಮಂತ್ರಗಳನ್ನು ಹೇಳಬೇಕು ? ಇತ್ಯಾದಿ ಪ್ರಶ್ನೆಗಳನ್ನು ಕೇಳಿದ್ದರು. ಇದರೊಂದಿಗೆ ಅಗ್ನಿಹೋತ್ರ ಮಾಡುವುದರಿಂದಾಗುವ ಆಧ್ಯಾತ್ಮಿಕ, ಶಾರೀರಿಕ ಮತ್ತು ವನಸ್ಪತಿ ಹಾಗೂ ವಾತಾವರಣದ ಮೇಲಾಗುವ ಲಾಭ, ವೈಜ್ಞಾನಿಕ ಸಂಶೋಧನೆ, ಅಣು ವಿಕಿರಣಗಳಿಂದ ನಮ್ಮ ರಕ್ಷಣೆ ಹೇಗೆ ಆಗುತ್ತದೆ ಎಂದು ತಿಳಿಸುವ ಸೂಕ್ಷ್ಮ ಪರೀಕ್ಷಣೆ ಇತ್ಯಾದಿಗಳೆಲ್ಲವುಗಳ ಬಗ್ಗೆ ಅನೇಕ ವಿಷಯಗಳನ್ನು ಗ್ರಂಥದಲ್ಲಿ ವಿವರವಾಗಿ ನೀಡಲಾಗಿದೆ. ಒಂದು ಸಲ ಖರೀದಿಸಿದರೆ ಅನೇಕ ಪೀಳಿಗೆಗಳವರೆಗೆ ತಮ್ಮೊಂದಿಗೆ ಶಾಶ್ವತವಾಗಿ ಇರಲಿದೆ. ಹಾಗಾಗಿ "ಅಗ್ನಿಹೋತ್ರ" ಗ್ರಂಥವನ್ನು ಇಬುಕ್ ಸ್ವರೂಪದಲ್ಲಿ ಮುಂದಿನ ಲಿಂಕ್‌ನಲ್ಲಿ ಖರೀದಿಸಬಹುದು. - https://play.google.com/store/books/details?id=_8ddEQAAQBAJ

🌸 ಅಗ್ನಿಹೋತ್ರದ ಬಗ್ಗೆ ತಾವು ಗ್ರಂಥವನ್ನು ಖರೀದಿಸಲು ಇಚ್ಛಿಸುತ್ತಿದ್ದಲ್ಲಿ ಈ ಸಂಖ್ಯೆಗೆ ಸಂಪರ್ಕಿಸಿ - 9342599299

5. ಅಧಿಕೃತ ದಾಖಲೆಗಳು ಮತ್ತು ಪ್ರಚಾರ

ಈ ಘಟನೆಯು ನಂತರದ ದಿನಗಳಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿತು. 'ದೈನಿಕ ಅಮರ್ ಉಜಾಲಾ' (ಡಿಸೆಂಬರ್ 2, 2018ರ ಆವೃತ್ತಿ) ಸೇರಿದಂತೆ ಅನೇಕ ರಾಷ್ಟ್ರೀಯ ಪತ್ರಿಕೆಗಳು ಈ ಕುಟುಂಬದ ಬದುಕುಳಿಯುವಿಕೆಯ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟಿಸಿದವು.

• ಸೋಹನ್ ಲಾಲ್ ಅವರ ಈ ಅನುಭವವನ್ನು ಕೇಳಿದ ಭೋಪಾಲ್‌ನ ಇತರ ನೂರಾರು ಜನರು ಅಗ್ನಿಹೋತ್ರದ ಮಹತ್ವವನ್ನು ಅರಿತು ಅದರ ಅನುಷ್ಠಾನಕ್ಕೆ ಮುಂದಾದರು.

• ಅನೇಕ ಸಂಶೋಧಕರು ಮತ್ತು ವಿಜ್ಞಾನಿಗಳು ಈ ಕುಟುಂಬದ ಆರೋಗ್ಯವನ್ನು ಪರೀಕ್ಷಿಸಿ, ಇವರ ಶ್ವಾಸಕೋಶದ ಮೇಲೆ ವಿಷಾನಿಲದ ಯಾವುದೇ ಅಡ್ಡಪರಿಣಾಮಗಳಾಗಿಲ್ಲ ಎಂಬುದನ್ನು ಕಂಡುಹಿಡಿದು ಬೆರಗಾದರು.

6. ಸಮಷ್ಟಿ ಕಲ್ಯಾಣಕ್ಕಾಗಿ ಅಗ್ನಿಹೋತ್ರ

ಓರ್ವ ಸಂತರು ಹೇಳುವಂತೆ, ಕುಶ್ವಾಹ ಕುಟುಂಬದ ಈ ಅನುಭವವು ಇಂದಿನ ಆಧುನಿಕ ಪ್ರಪಂಚಕ್ಕೆ ಒಂದು ದೊಡ್ಡ ಪಾಠ. ಇಂದು ವಾಯುಮಾಲಿನ್ಯ ಮತ್ತು ರಾಸಾಯನಿಕ ವಿಪತ್ತುಗಳ ಭೀತಿ ಹೆಚ್ಚುತ್ತಿರುವ ಕಾಲದಲ್ಲಿ, ಅಗ್ನಿಹೋತ್ರವು ಒಂದು 'ವಾತಾವರಣದ ಔಷಧಿ'ಯಾಗಿ ಕೆಲಸ ಮಾಡುತ್ತದೆ. ಇದು ಕೇವಲ ನಮ್ಮನ್ನು ರಕ್ಷಿಸುವುದು ಮಾತ್ರವಲ್ಲದೆ, ಇಡೀ ಸಮಾಜಕ್ಕೆ ಶುದ್ಧ ಗಾಳಿಯನ್ನು ಒದಗಿಸುವ ಮೂಲಕ 'ಸಮಷ್ಟಿ ಪುಣ್ಯ'ಕ್ಕೆ ಕಾರಣವಾಗುತ್ತದೆ.

ಸಾರಾಂಶ: ಭೋಪಾಲ್ ಅನಿಲ ದುರಂತದಲ್ಲಿ ಕುಶ್ವಾಹ ಕುಟುಂಬದ ರಕ್ಷಣೆಯು ಅಗ್ನಿಹೋತ್ರದ ಶಕ್ತಿಗೆ ಅಳಿಸಲಾಗದ ಸಾಕ್ಷಿಯಾಗಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ, ಶ್ರದ್ಧೆ ಮತ್ತು ಸರಿಯಾದ ವಿಧಾನದಿಂದ ಮಾಡುವ ಅಗ್ನಿಹೋತ್ರವು ಮೃತ್ಯುವಿನ ದವಡೆಯಿಂದಲೂ ನಮ್ಮನ್ನು ಪಾರುಮಾಡಬಲ್ಲದು ಎಂಬುದು ಈ ಘಟನೆಯಿಂದ ದೃಢಪಟ್ಟಿದೆ.

(ದಯವಿಟ್ಟು ಗಮನಿಸಿ : ಕೇವಲ ಮಾಹಿತಿಗಾಗಿ ಚಿತ್ರವನ್ನು ಏಐ ನಿಂದ ತಯಾರಿಸಿ ಹಾಕಲಾಗಿದೆ. ಅಗ್ನಿಹೋತ್ರಕ್ಕೆ ಕುಳಿತುಕೊಳ್ಳುವ ಕ್ರಮ ಚಿತ್ರದಲ್ಲಿ ತೋರಿಸಿದಂತಿಲ್ಲ.)

WhatsApp - https://whatsapp.com/channel/0029VaJS8sH8vd1YM2SVAt1r

Youtube - https://www.youtube.com/

Instagram - https://www.instagram.com/dharma.granth

Scientists have confirmed that all living things glow with a faint light; until they die.Your body is glowing right now,...
12/03/2026

Scientists have confirmed that all living things glow with a faint light; until they die.
Your body is glowing right now, though not in a way the human eye can see. Using ultra-sensitive imaging technology, researchers from the University of Calgary and Canada’s National Research Council have successfully captured
“ultraweak photon emission”—a faint, visible light produced by living organisms. By observing mice in total darkness, the team discovered that living tissue radiates significantly more photons than dead tissue, proving that this glow is a direct byproduct of biological life. Unlike body heat, which is infrared radiation, these emissions are in the visible spectrum and originate from the chemical reactions occurring within our cells.
This biological light is fueled by reactive oxygen species created during normal metabolism. When these molecules interact with proteins and lipids, they release tiny bursts of energy in the form of light. The study found that this glow intensifies under physical stress; injured plants, for instance, emitted much brighter signals. This discovery offers a revolutionary path for future medical diagnostics. Since the intensity of the light reflects the level of oxidative stress and metabolic activity, scientists believe these invisible signals could eventually serve as non-invasive markers for monitoring organ vitality, disease progression, and overall health.

source: University of Calgary & National Research Council of Canada. (2025). Imaging Ultraweak
Photon Emission from Living and Dead Mice and from Plants under Stress. The Journal of Physical Chemistry Letters.

02/03/2026

Chandra Grahana
Starts at 6:28pm IST & Ends at 6:47pm IST

🌙 Take bath & finish meals before the eclipse begins (6:28pm IST)
🌙 During the eclipse, avoid eating & spend time in mantra japa (Om Krishnaya namaha, Om Namo Narayanaya, Om namah Shivaya, etc).
🌙 Use this time for quiet prayer & remembrance of your preferred deity.
🌙 After it ends, take bath & eat freshly prepared food (6:47pm IST)
🌙 If possible, offer a small prayer or charity as a service to God.

🕉️ Jai SriKrishna 🌸🙏😇

26/02/2026

I tag .bharadwaj_

Come, let’s spread the joy of observing Ekadashi 🕉️✨💗😇

Address

Bangalore

Opening Hours

Monday 9am - 10am
6:15pm - 7:15pm
Tuesday 9am - 10am
6:15pm - 7:15pm
Wednesday 9am - 10am
6:15pm - 7:15pm
Thursday 9am - 10am
6:15pm - 7:15pm
Friday 9am - 10am
6:15pm - 7:15pm

Alerts

Be the first to know and let us send you an email when Beloved Yoga posts news and promotions. Your email address will not be used for any other purpose, and you can unsubscribe at any time.

Shortcuts

Share

Category