08/07/2023
ಕಡಿಮೆ ಹಣ.. ಸರ್ವರೋಗಗಳಿಗೂ ರಾಮಬಾಣ..
ಇದು ಹೋಮಿಯೋಪತಿ ವಿಧಾನ
́ಊಟ ಬಲ್ಲವಿನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ́ ಎಂಬ ಗಾದೆ ಮಾತಿದೆ. ನಿಜ ಇವತ್ತು ಆಹಾರದ ಕಾರಣಗಳಿಂದಾಗಿಯೇ ಮನುಷ್ಯ ನಾನಾರೋಗಗಳಿಗೆ ತುತ್ತಾಗುತ್ತಿದ್ದಾನೆ. ಅನುವಂಶಿಕ ಕಾರಣ, ಪರಿಸರ ಮಾಲಿನ್ಯ, ಸಾಂಕ್ರಾಮಿಕ ಸೋಂಕುಗಳಿಂದಾಗಿಯು ಜನ ಕಾಯಿಲೆಗಳಿಗೆ ಸಿಲುಕುತ್ತಿದ್ದಾರೆ. ಇಂದಿನ ಆಧುನಿಕ, ಒತ್ತಡದ ಜೀವನಶೈಲಿಯಿಂದಾಗಿ ಆನೇಕ ದೈಹಿಕ, ಮಾನಸಿಕ ಸಮಸ್ಯೆಗಳು ಮನುಷ್ಯನನ್ನು ಬಾಧಿಸುತ್ತಿವೆ. ಪ್ರತಿಯೊಂದು ಮನೆಯಲ್ಲೂ ಒಬ್ಬರಿಗಲ್ಲ ಒಬ್ಬರಿಗೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳಿರುತ್ತವೆ. ಕೆಲವೊಂದು ತಾತ್ಕಾಲಿಕವಾಗಿ ಬಂದುಹೋಗುವ ಕಾಯಿಲೆಗಳಾಗಿದ್ದರೆ, ಮತ್ತೆ ಕೆಲವು ಜೀವನಪೂರ್ತಿ ಔಷಧಿ ಪಡೆಯುವ ಕಾಯಿಲೆಗಳಾಗಿರುತ್ತವೆ. ಇಂದಿನ ದಿನಗಳಲ್ಲಿ ಯಾರಿಗೆ ಆದರೂ ಜ್ವರ, ನೆಗಡಿ, ಕೆಮ್ಮು, ಶೀತ, ತಲೆನೋವು, ಮೈಕೈ ನೋವು ಹೀಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಂಡು ಬಂದರೂ ಥಟ್ ಅಂತಾ ನೆನಪಾಗೋದು ಇಂಗ್ಲಿಷ್ ಮೆಡಿಸಿನ್. ಬಹುಪಾಲು ಮಂದಿ ಖಾಸಗಿ ಆಸ್ಪತ್ರೆಗಳಿಗೆ ಮುಗಿಬೀಳುತ್ತಾರೆ. ಇನ್ನು ದೊಡ್ಡ ದೊಡ್ಡ ರೋಗಗಳು ಬಂದರಂತೂ ದೊಡ್ಡ ದೊಡ್ಡ ಆಸ್ಪತರೆಗಳಿಗೆ ಹೋಗಿ ಚಿಕಿತ್ಸೆಗಾಗಿ ಲಕ್ಷ ಲಕ್ಷ ಹಣ ಸುರಿಯುತ್ತಾರೆ. ಆದರೆ ಸ್ವಾಭಾವಿಕ ಚಿಕಿತ್ಸೆಯ ಮೂಲ ತತ್ವವಾದ ಆಯುರ್ವೇದ, ಹೋಮಿಯೋಪತಿ ಚಿಕಿತ್ಸೆಯ ಬಗ್ಗೆ ಯಾರಿಗೂ ನೆನಪಾಗುವುದಿಲ್ಲ. ಇಂದು ನಮಗೆ ಬೇಕಾಗಿರುವುದು ರೋಗಮುಕ್ತ ಜೀವನಶೈಲಿ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದ ಹಾಗೆ ತಡೆಯುವುದು ಬಹಳ ಮುಖ್ಯ. ನಮ್ಮನ್ನು ಬಾಧಿಸುತ್ತಿರುವ ಕಾಯಿಲೆಗಳನ್ನು ನಾವು ಪಡೆಯುವ ಔಷಧಿಗಳಿಂದ ಯಾವುದೇ ಅಡ್ಡ ಪರಿಣಾಮಗಳಾಗದಂತೆ ಗುಣಪಡಿಸಿಕೊಳ್ಳವುದು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಹೋಮಿಯೋಪತಿ ವೈದ್ಯ ಪದ್ಧತಿ ಚಮತ್ಕಾರಿ ಪರಿಣಾಮಗಳನ್ನು ಉಂಟು ಮಾಡುತ್ತದೆ. ಮನುಷ್ಯನ ದೇಹವನ್ನು ಸ್ವಸ್ಥವಾಗಿಡಲು, ಯಾವುದೇ ಕಾಯಿಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವಲ್ಲಿ ಶತ ಶತಮಾನಗಳ ಇತಿಹಾಸವಿರುವ ಹೋಮಿಯೋಪತಿ ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ವೈದ್ಯಕೀಯ ರಂಗದಲ್ಲಿ ಹೋಮಿಯೋಪತಿ ಕ್ರಾಂತಿ
ವಿಶ್ವದೆಲ್ಲೆಡೆ ಇಂದು ಹೋಮಿಯೋಪಥಿ ಚಿಕಿತ್ಸೆ ಪ್ರವರ್ಧಮಾನಕ್ಕೆ ಬಂದಿದೆ. ನೈಸರ್ಗಿಕ ಚಿಕಿತ್ಸಾ ವಿಧಾನದತ್ತ ಜನ ವಾಲುತ್ತಿದ್ದಾರೆ. ಹಿಂಸಾತ್ಮಕವಲ್ಲದ, ರಾಸಾಯನಿಕ ಔಷಧಿಗಳಿಂದ ದೇಹವನ್ನು ಜರ್ಜರಿತಗೊಳಿಸದ, ಒಂದು ರೋಗ ಗುಣಪಡಿಸಿ ಮತ್ತೊಂದು ಕಾಯಿಲೆಗೆ ದಾರಿಮಾಡಿಕೊಡದಿರುವ, ಪ್ರಕೃತಿದತ್ತವಾದ ಔಷಧಿಗಳಿಂದ ವಾಸಿಮಾಡಬಹುದಾದ ಚಿಕಿತ್ಸಾ ವಿಧಾನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಪೈಕಿ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ.
ಸಾಂಪ್ರದಾಯಿಕ ಔಷಧ ಪದ್ಧತಿಗೆ ಸಾಂಸ್ಥಿಕ ರೂಪ
ಅಲೋಪತಿ, ಯುನಾನಿ ಮುಂತಾದ ಆಧುನಿಕ ಚಿಕಿತ್ಸಾ ವಿಧಾನಗಳು ಬರುವುದಕ್ಕಿಂತ ಮೊದಲು ಪುರಾತನ ಕಾಲದಿಂದಲೂ ರೂಢಿಗತವಾಗಿ ಬಂದಿರುವುದು ನೈಸರ್ಗಿಕ ಗಿಡಮೂಲಿಕೆಗಳಿಂದ ಚ