Panchamasali Community

Panchamasali Community Welcome To Panchamasali Jagadguru Peetha - Shivamogga Road, Hanagawadi Post, Davanagere Dist, Karnataka state, 577601

21/05/2026
20/05/2026
16/05/2026

ಉಚ್ಛಾಟಿತ ಧರ್ಮದರ್ಶಿ ಗುಳುಂಪತಿ ಬೆಳ್ಳಿ ಎಲ್ಲಿ ಮತ್ತು ಯಾರ ಹೆಸರಲ್ಲಿ ಇಟ್ಟಿದೆಯಪ್ಪಾ? ಅದರಿಂದ ಬರುತ್ತಿರುವ ಬಡ್ಡಿ ಹಣ ಎಷ್ಟು ಗುಳುಂ ಮಾಡಿದೆ ಯಪ್ಪಾ? ಎಲ್ಲಿದೆಯಪ್ಪಾ?

13/05/2026

ಪರಮಪೂಜ್ಯ ಶ್ರೀ ಶ್ರೀ ರವಿಶಂಕರ ಗುರೂಜಿಗಳವರ 70ನೇ ಜನ್ಮದಿನದ ಈ ಪವಿತ್ರ ಸಂದರ್ಭದಲ್ಲಿ, ನನ್ನ ಹೃತ್ಪೂರ್ವಕ ಪ್ರಣಾಮಗಳು, ಆತ್ಮೀಯ ಶುಭಾಶಯಗಳು ಹಾಗೂ ಅನಂತ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಗುರೂಜಿಗಳೇ, ನೀವು ಸದಾ ನಮ್ಮ ಬದುಕಿನ ಪ್ರೇರಣೆ, ಆಶ್ರಯ, ಧೈರ್ಯ ಮತ್ತು ಆತ್ಮಜಾಗೃತಿಯ ದಿವ್ಯ ದೀಪವಾಗಿದ್ದೀರಿ. ನಿಮ್ಮ ಕರುಣಾಮಯ ಸಾನ್ನಿಧ್ಯವು ಲಕ್ಷಾಂತರ ಹೃದಯಗಳಿಗೆ ಶಾಂತಿ, ಪ್ರೀತಿ ಮತ್ತು ನವಚೈತನ್ಯವನ್ನು ನೀಡುತ್ತಿದೆ.

ನಿಮ್ಮ ನಗು ವಿಶ್ವಕ್ಕೆ ಆಶೀರ್ವಾದವಾಗಲಿ, ನಿಮ್ಮ ಉಸಿರು ಮಾನವತೆಯ ಆಶಾಕಿರಣವಾಗಲಿ.
ನಿಮ್ಮ ದಿವ್ಯ ಜೀವನವು ಇನ್ನೂ ಅನೇಕ ಕೋಟಿ ಆತ್ಮಗಳಿಗೆ ಬೆಳಕಾಗಲಿ.

11/05/2026

ಜನನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು ಲಿಂ.ಶ್ರೀ ಜೆ.ಎಚ್.ಪಟೇಲ್ ಅವರ ಸಹೋದರಿ ಶ್ರೀಮತಿ ಅನುಸೂಯಮ್ಮನವರು ಚನ್ನಗಿರಿ ತಾಲ್ಲೂಕಿನ ತ್ಯಾವಣಗಿ ಲಿಂಗೈಕ್ಯರಾಗಿದ್ದು ಈ ಸಂಧರ್ಭದಲ್ಲಿ ಹರಿಹರ ಹರಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಅಂತಿಮ ನಮನ ಸಲ್ಲಿಸಿದರು.

ಹರಿಹರ ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಶ್ರೀಪೀಠದ ಪರಮ ಸದ್ಭಕ್ತರಾಗಿದ್ದ ಲಿಂಗೈಕ್ಯ ಶ್ರೀ ಶಿವನಗೌಡವರ ಸ್ಮರಣೋತ್ಸವದ ಪಾವನ ನಿಮಿತ್ಯ, ಹರಿಹರ ಹರಪೀ...
11/05/2026

ಹರಿಹರ ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಶ್ರೀಪೀಠದ ಪರಮ ಸದ್ಭಕ್ತರಾಗಿದ್ದ ಲಿಂಗೈಕ್ಯ ಶ್ರೀ ಶಿವನಗೌಡವರ ಸ್ಮರಣೋತ್ಸವದ ಪಾವನ ನಿಮಿತ್ಯ, ಹರಿಹರ ಹರಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಮಹಾಮನೆಗೆ ಪಾದಾರ್ಪಣೆಗೈದು ಕುಟುಂಬದ ಬಂಧು-ಬಾಂಧವರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ ಆಶೀರ್ವಚನ ನೀಡಿದರು.

ಭಕ್ತನ ದೇಹ ಲೀನವಾದರೂ ಭಕ್ತಿ ಎಂದಿಗೂ ಲೀನವಾಗುವುದಿಲ್ಲ.
ಸತ್ಭಕ್ತರ ನೆನಪುಗಳು ಮನೆತನಕ್ಕೆ ದೀಪವಾಗುತ್ತವೆ, ಸಂಸ್ಕಾರಕ್ಕೆ ಜೀವವಾಗುತ್ತವೆ.
ಲಿಂಗೈಕ್ಯ ಶಿವನಗೌಡವರ ಜೀವನವು ಶ್ರೀಪೀಠದ ಮೇಲಿನ ಅಚಲ ನಿಷ್ಠೆ, ಸೇವಾಭಾವ ಮತ್ತು ಶರಣ ಸಂಸ್ಕೃತಿಯ ಪ್ರತೀಕವಾಗಿತ್ತು.

ಈ ಸಂದರ್ಭದಲ್ಲಿ ಮಹಾಸ್ವಾಮಿಗಳವರು ಕುಟುಂಬದವರಿಗೆ ಧೈರ್ಯ, ಶಾಂತಿ ಹಾಗೂ ಶಿವಸ್ಮರಣೆಯ ಸಂದೇಶ ನೀಡಿ, “ಭಕ್ತನ ಜೀವನವೇ ಒಂದು ಮೌನ ವಚನ; ಅವನ ಸೇವೆಯೇ ಅವನ ಅಮರತ್ವ” ಎಂದು ಆಶೀರ್ವದಿಸಿದರು.

ಮಹಾಮನೆಯ ಆಂಗಳದಲ್ಲಿ ಆ ದಿನ ಕೇವಲ ಸ್ಮರಣೆಯಿರಲಿಲ್ಲ…
ಅದು ಭಕ್ತಿ, ಬಂಧುತ್ವ, ಕೃತಜ್ಞತೆ ಮತ್ತು ಹರಚೈತನ್ಯದ ಪುನರುಜ್ಜೀವನವಾಗಿತ್ತು.

Address

311, Shivamogga Road, Hanagawadi Post
Harihar
577601

Alerts

Be the first to know and let us send you an email when Panchamasali Community posts news and promotions. Your email address will not be used for any other purpose, and you can unsubscribe at any time.

Contact The Practice

Send a message to Panchamasali Community:

Share