01/11/2026
‘ತಟ್ಟೆ’ ಗೂ ‘ಬಿಟ್ಟಿ’ ಗೂ ವ್ಯತ್ಯಾಸ ಇದೆಯಲ್ಲವೇ?
(ಬ್ರಾಹ್ಮಣರು ಹಾಗೂ ಬ್ರಾಹ್ಮಣದ್ವೇಷಿಗಳು ಎಲ್ಲರೂ ತಿಳಿದುಕೊಳ್ಳಬೇಕಾದ ವಿಚಾರ)
‘ಸ್ಪರ್ಶಿಸಬಾರದು’ ಎನ್ನುವ ಅರ್ಥವನ್ನು ಕೊಡುವ ‘ಅಸ್ಪರ್ಶ’ ಎನ್ನುವ ಶಬ್ದವು ಅಪಭ್ರಂಶವಾಗಿ ‘ಅಸ್ಪೃಶ್ಯ’ ಎಂದಾಯಿತು.
ಪ್ರಾಣಿಗಳಲ್ಲಿ ಹಲವು ಜಾತಿಯ ಪ್ರಾಣಿಗಳಿವೆ; ಆಹಾರ, ಸ್ವಭಾವ, ಸ್ವಚ್ಛತೆ, ಸಾಕುವಿಕೆ ಮುಂತಾದವುಗಳ ಆಧಾರದ ಮೇಲೆ ವಿಂಗಡಣೆ ಮಾಡಲಾಗಿದೆ. ಮಾಂಸಾಹಾರಿ ಪ್ರಾಣಿಗಳಿಗಿಂದ ಸಸ್ಯಾಹಾರಿ ಪ್ರಾಣಿಗಳು ಸ್ವಚ್ಛತೆಯ ದೃಷ್ಟಿಯಿಂದ ಶ್ರೇಷ್ಠವೆಂದೇ ಹೇಳಬಹುದು. ಸಸ್ಯಾಹಾರಿ ಪ್ರಾಣಿಗಳು ಎಲ್ಲವೂ ಸ್ಪೃಶ್ಯವೇ ಆಗಿವೆ. ಹಾಗಂತ ಮಾಂಸಾಹಾರಿ ಪ್ರಾಣಿಗಳು ಎಲ್ಲವೂ ಅಸ್ಪೃಶ್ಯ ಎಂದು ಹೇಳಲಾಗದು. ಸಾತ್ವಿಕ ಪ್ರಾಣಿಗಳಾದ ಬೆಕ್ಕು, ಹಲ್ಲಿ, ಊಸರವಳ್ಳಿ, ಓತಿಕ್ಯಾತ, ಕಪ್ಪೆ ಮುಂತಾದವು ಮಾಂಸಾಹಾರಿಗಳಾದರೂ ಹೇಗೆ ಅಸ್ಪೃಶ್ಯವಲ್ಲವೋ ಅಂತೆಯೇ, ಸಿಂಹ, ಹುಲಿ, ಚಿರತೆ, ತೋಳ ಮುಂತಾದ ಕ್ರೂರ ಪ್ರಾಣಿಗಳೂ ಅಸ್ಪೃಶ್ಯವಲ್ಲ, ಏಕೆಂದರೆ ಅವುಗಳನ್ನು ಮುಟ್ಟುವುದರಿಂದ ಅಪಾಯ ಸಂಭವಿಸಬಹುದೇ ಹೊರತು, ಮುಟ್ಟಲು ಸಾಧ್ಯವಿದ್ದರೆ ಖಾಯಿಲೆಗಳಂತೂ ಖಂಡಿತ ಬರುವುದಿಲ್ಲ. ಕೊಳಚೆಯಲ್ಲಿ ಹೊರಳಾಡುವ ಹಂದಿ, ನಾಯಿ ಮುಂತಾದ ಪ್ರಾಣಿಗಳನ್ನು ಆದಷ್ಟು ಮುಟ್ಟಬಾರದು. ಸಾಕಿದ ಹಂದಿಯನ್ನೋ ಅಥವಾ ನಾಯಿಯನ್ನೋ ಅನಿವಾರ್ಯ ಸಂದರ್ಭದಲ್ಲಿ ಮುಟ್ಟಿದರೆ ತಪ್ಪಿಲ್ಲ; ನಂತರ ಸ್ನಾನ ಮಾಡಿದರಾಯಿತು. ಅಸ್ಪೃಶ್ಯ ಜಾತಿಗೆ ಸೇರಿದ ಒಂದೇ ಒಂದು ಪ್ರಾಣಿವರ್ಗವೇ ಬೀದಿನಾಯಿಗಳು. ಬೀದಿನಾಯಿಗಳು ಯಾರಿಂದಲೂ ಸಾಕಲ್ಪಡುವುದಿಲ್ಲ; ಕಾರಣ, ಬೀದಿನಾಯಿಗಳು ಯಜಮಾನನಿಗೆ ವಿಧೇಯವಾಗಿ ಇರುವ ಅರ್ಹತೆ ಹೊಂದಿರುವುದಿಲ್ಲ. ಬೀದಿನಾಯಿಗಳನ್ನು ಸ್ಪರ್ಶಿಸಿದರೆ ಖಾಯಿಲೆಗಳೂ ಬರಬಹುದು, ಅಪಾಯವೂ ಸಂಭವಿಸಬಹುದು. ಬೀದಿನಾಯಿಗಳನ್ನು ಅಸ್ಪೃಶ್ಯವೆನ್ನಲು ಅನೇಕ ಕಾರಣಗಳಿವೆ. ಬೀದಿನಾಯಿಗಳು ಸಾಕುನಾಯಿಗಳಂತೆ ಶಿಸ್ತಿನಿಂದ ಬೆಳೆಯುವುದಿಲ್ಲವಾದ್ದರಿಂದ ಸ್ವಲ್ಪವೂ ಸ್ವಚ್ಛತೆಯನ್ನು ಹೊಂದಿರುವುದಿಲ್ಲ. ಬೀದಿನಾಯಿಗಳು ದಾರಿಹೋಕರಿಂದ ಕಸಿದುಕೊಂಡು ಬಿಟ್ಟಿ ತಿನ್ನುವ ಜಾಯಮಾನದವು. ಎಲ್ಲಕ್ಕಿಂತಲೂ ಮುಖ್ಯವಾದ ವಿಚಾರವೆಂದರೆ, ಬಿಟ್ಟಿ ತಿನ್ನುವ ಬೀದಿನಾಯಿಗಳು ಹಸುಗಳಿಗೆ ಇಟ್ಟಿರುವ ತಟ್ಟೆಯ ಕಡೆ ನೋಡಿ ಗುರಾಯಿಸುವುದು, ಮುಖದ ಹತ್ತಿರ ಬಂದು ಬೊಗಳುವುದು, ಕಚ್ಚುವುದು ಮುಂತಾದವನ್ನು ಮಾಡುತ್ತವೆ. ಗೋಶಾಲೆಗಳಲ್ಲಿ ಹಾಗೂ ಹೆಚ್ಚಿನ ಮನೆಗಳಲ್ಲೂ ಹಸುಗಳಿಗೆ ಏನಾದರೂ ತಿನ್ನಲು ಇಡುವಾಗ ತಟ್ಟೆ, ಅಡಿಕೆ ಹಾಳೆ, ಮರಿಗೆ ಏನಾದರೂ ಅಡಿಗೆ ಇಡಲಾಗುತ್ತದೆ. ಸಣ್ಣ ತಿಂಡಿಯಾದರೆ ಕೈಯಿಂದಲೇ ನೀಡಲಾಗುತ್ತದೆ. ಬೀದಿನಾಯಿಗಳಿಗೆ ಆಹಾರವನ್ನು ಹೆಚ್ಚಾಗಿ ಯಾರೂ ತಟ್ಟೆಯಲ್ಲಿ ಇಡುವುದಿಲ್ಲ. ಕಾರಣ, ಅವುಗಳು ತಮ್ಮ ಅವಿವೇಕದಿಂದ ತಟ್ಟೆಯನ್ನೇ ಕಚ್ಚಿಕೊಂಡು ಹೋಗಿ ಎಲ್ಲೆಲ್ಲೋ ಎಸೆಯುವುದು, ಸಿಟ್ಟಿನಿಂದ ತಟ್ಟೆ ಮುರಿದು ಹಾಕುವುದು ಮುಂತಾದವನ್ನು ಮಾಡುತ್ತವೆ. ಅಷ್ಟೇ ಅಲ್ಲ, ಬಿಸ್ಕತ್, ರಸ್ಕ್ ಮುಂತಾದವನ್ನು ಹಾಕುವಾಗಲೂ ದೂರದಿಂದಲೇ ಹಾಕಲಾಗುತ್ತದೆ, ಕೈಯಿಂದ ಕೊಟ್ಟರೆ ಕೈಯನ್ನೇ ಕಚ್ಚುವ ಸಾಧ್ಯ ಇರುತ್ತದೆ ಹಾಗಾಗಿ. ಹಸುಗಳಿಗೆ ಆಹಾರ ತಟ್ಟೆಯಲ್ಲಿಡುವುದನ್ನು ನೋಡಿ ಉರಿದುಕೊಂದು ಬೀದಿನಾಯಿ ಬೊಗಳುವುದೂ ಇರಬಹುದು. ಆದರೆ, ‘ತಟ್ಟೆ’ ಗೂ ‘ಬಿಟ್ಟಿ’ ಗೂ ವ್ಯತ್ಯಾಸ ಇದೆಯಲ್ಲವೇ? ಬಾಲ್ಯದಿಂದ ಮುಪ್ಪಿನವರೆಗೆ ಜನ್ಮ ಕೊಟ್ಟ ತಾಯಿಗಿಂತಲೂ ಹೆಚ್ಚಾಗಿ ಹಸು ನಮ್ಮನ್ನು ಸಲಹುವ ಕಾರಣ, ಸನಾತನ ಧರ್ಮದಲ್ಲಿ ಹಸುವಿಗೊಂದು ವಿಶೇಷ ಸ್ಥಾನವಿದೆ, ಗೌರವವಿದೆ, ‘ಮಾತೆ’ ಎನ್ನಲಾಗುತ್ತದೆ. ಹಾಗಿಯೇ ಹಸುವಿಗೆ ತಟ್ಟೆಯಲ್ಲಿ ಆಹಾರ ನೀಡುವುದು. ಆದರೆ ಜನ್ಮತಃ ಅವಿವೇಕಿಯಾದ ಬೀದಿನಾಯಿಗೆ ಇವೆಲ್ಲಾ ಅರ್ಥವಾಗುವುದಿಲ್ಲ. ಗೋಶಾಲೆಗಳಿಗೆ ಗೋವುಗಳ ಮೇಲೆ ಪ್ರೀತಿ ಹಾಗೂ ಭಕ್ತಿ ಇದ್ದವರು ಮಾತ್ರ ಬರುವುದು ಹಾಗೂ ತಟ್ಟೆಯಲ್ಲಿ ಆಹಾರ ನೀಡುವುದು; ಗೋವುಗಳು ತಾವೇ ಎಲ್ಲರಿಂದ ಕಸಿದುಕೊಂಡು ತಿನ್ನುವುದಿಲ್ಲ. ಆದರೆ ಬೀದಿನಾಯಿಗಳು ಹಾಗಲ್ಲ, ದಾರಿಹೋಕರು ಯಾರೇ ಆಗಿದ್ದರೂ ಅವರಿಂದ ಕಸಿದುಕೊಂಡು ಬಿಟ್ಟಿ ತಿನ್ನುತ್ತವೆ. ಬಿಟ್ಟಿ ತಿನ್ನುವ ಬೀದಿನಾಯಿಗಳು ದಾರಿಹೋಕರನ್ನು ಹಾಗೂ ಅನ್ಯ ಪ್ರಾಣಿಗಳನ್ನು ಕಂಡು ಬೊಗಳುವುದು, ಓಡಿಸಿಕೊಂಡು ಹೋಗುವುದು, ಮಕ್ಕಳನ್ನು ಕಚ್ಚಿ ಸಾಯಿಸುವುದು ಮುಂತಾದವನ್ನು ಮಾಡುತ್ತವೆ. ಆದರೆ ಬೀದಿಯಲ್ಲಿ ಮೇಯುತ್ತಿದ್ದ ಯಾವುದೇ ಹಸುವೂ ದಾರಿಹೋಕರಿಗಾಗಲಿ, ಅನ್ಯ ಪ್ರಾಣಿಗಳಿಗಳಿಗಾಗಲಿ ತೊಂದರೆ ಕೊಟ್ಟ ಒಂದೇಒಂದು ಉದಾಹರಣೆ ಸಿಗುವುದಿಲ್ಲ. ಇವೇ ಕಾರಣಗಳಿಗೋಸ್ಕರ ಬೀದಿನಾಯಿಗಳನ್ನು ಎಲ್ಲರೂ ಅಸ್ಪೃಶ್ಯವೆಂದು ತಿಳಿದು ದೂರವಿರಿಸುವುದು. ಆದರೆ ಇದಕ್ಕೆ ನೊಂದುಕೊಂಡು ಬೀದಿನಾಯಿಗಳು ಗುರಾಯಿಸುವುದು ಹಸುಗಳ ಎದುರು ಮಾತ್ರ. ಏಕೆಂದರೆ ಬೀದಿನಾಯಿಗಳಿಗೆ ಬಹಳ ಚೆನ್ನಾಗಿ ಗೊತ್ತಿದೆ ಅನ್ಯ ಪ್ರಾಣಿಗಳ ಎದುರು ಗುರಾಯಿಸಿದರೆ, ಅವೆಲ್ಲಾ ಒಟ್ಟಾಗಿ ಬಂದು ತನ್ನ ಕತೆ ಮುಗಿಸುತ್ತವೆ ಅಂತ. ಹಸುಗಳು ಶ್ರೇಷ್ಠವಾದರೂ ಸಾಧು ಸ್ವಭಾವದವು ಹಾಗೂ ಅವುಗಳಲ್ಲಿ ಒಗ್ಗಟ್ಟಿಲ್ಲ, ಬೇರೆ ಎಲ್ಲಾ ಪ್ರಾಣಿಗಳ ಸಂಖ್ಯೆಗೆ ಹೋಲಿಸಿದರೆ ಹಸುಗಳ ಸಂಖ್ಯೆ ತೀರಾ ಕಡಿಮೆ. ಹಾಗಾಗಿ ಅಸಹಾಯಕತೆಯಿಂದ ಹಸುಗಳು ಬೀದಿನಾಯಿಯ ಉಪಟಳಕ್ಕೆ ಸುಮ್ಮನಿರುತ್ತವೆ. “ವೋಟ್ ಬ್ಯಾಂಕಿಂಗ್ ಪಕ್ಷ” ಎಂದೇ ಕರೆಸಿಕೊಂಡಿರುವ ಕಾಂಗ್ರೆಸ್ ಇಂತಹ ಬೀದಿನಾಯಿಗಳನ್ನು ಬೆಂಬಲಿಸುತ್ತಿರುವುದು ಈ ದೇಶದ ದೊಡ್ಡ ದುರಂತ. ಬೀದಿನಾಯಿಗಳಿಗೆ ಮಾಂಸಾಹಾರ ನೀಡುವ ಉದ್ದೇಶ ಹೊಂದಿದ್ದ ಜುಲೈ ೨೦೨೫ ರ ಕರ್ನಾಟಕದ “ಬಿರ್ಯಾನಿ ಭಾಗ್ಯ” ವೇ ಇದಕ್ಕೆ ಸಾಕ್ಷಿ.
ಈ ಜಗತ್ತಿನ ಎಲ್ಲಾ ಜೀವಜಂತುಗಳೂ ಆ ಪರಮಾತ್ಮನದ್ದೇ ಸೃಷ್ಟಿ. ಎಲ್ಲಾ ಪ್ರಾಣಿಗಳಲ್ಲೂ ಪರಮಾತ್ಮನ ಅಂಶವಿದೆ. ಹಾಗಾಗಿ ಯಾವ ಪ್ರಾಣಿಯೂ ಮೇಲೂ ಅಲ್ಲ, ಕೀಳೂ ಅಲ್ಲ. ಆದರೆ ಪೂರ್ವಜನ್ಮದ ಕರ್ಮಪ್ರಾರಬ್ಧಗಳು ಅಂತ ಇದ್ದೇ ಇರುತ್ತವೆ. ಪೂರ್ವಜನ್ಮದ ಕುಕೃತ್ಯಗಳಿಂದ ಹೀನ ಜನ್ಮ ಪಡೆದಿರುವ ಬೀದಿನಾಯಿಗಳು ಅಸ್ಪೃಶ್ಯವೂ ಹೌದು, ಅಯೋಗ್ಯವೂ ಹೌದು. ಹಾಗಾಗಿ, ಸ್ವಚ್ಛತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ಬೀದಿನಾಯಿಗಳಿಂದ ದೂರವಿರುವುದು ಉತ್ತಮ.
ಅಂದಹಾಗೆ, 'ಬ್ರಾಹ್ಮಣರು ಹಾಗೂ ಬ್ರಾಹ್ಮಣದ್ವೇಷಿಗಳು ಎಲ್ಲರೂ ತಿಳಿದುಕೊಳ್ಳಬೇಕಾದ ವಿಚಾರ' ಎಂದು ಶೀರ್ಷಿಕೆಯಲ್ಲಿ ಹೇಳಿದ್ದಕ್ಕೆ ಕಾರಣವೂ ಇದೆ. ಹಿಂದಿನ ಕಾಲದಿಂದ ಈಗಿನ ಕಾಲದವರೆಗೆ ಬ್ರಾಹ್ಮಣರು ನಾಯಿಯನ್ನು (ವಿಶೇಷವಾಗಿ ಬೀದಿನಾಯಿಯನ್ನು) ಮುಟ್ಟಬಾರದು ಎನ್ನುವ ನಿಯಮವಿದೆ. ಬ್ರಾಹ್ಮಣರು ಸಂಧ್ಯಾವಂದನೆ, ಪೂಜೆ, ಹೋಮ-ಹವನಾದಿಗಳನ್ನು ಮಾಡುವವರು. ಹಾಗಾಗಿ ಶುದ್ಧತೆ ಅಗತ್ಯ. ಹಾಗಾಗಿ ಇವೆಲ್ಲಾ ಗೊತ್ತಿಲ್ಲದ ಬ್ರಾಹ್ಮಣರಿಗೆ ತಿಳಿಯಲಿ ಎನ್ನುವ ಕಾರಣಕ್ಕೋಸ್ಕರ ಹೇಳಿದ್ದೇನೆ. ಇನ್ನು, ಬ್ರಾಹ್ಮಣದ್ವೇಷಿಗಳೂ ತಿಳಿದುಕೊಳ್ಳಬೇಕು ಏಕೆಂದರೆ, ಬ್ರಾಹ್ಮಣರು ನಾಯಿಯನ್ನು (ಬೀದಿನಾಯಿಯನ್ನು) ಮುಟ್ಟದಿರಲು ಸರಿಯಾದ ಕಾರಣ ತಿಳಿಯದೆ ಬ್ರಾಹ್ಮಣರನ್ನು ನಿಂದಿಸುವವರಿರುತ್ತಾರೆ. ಅವರಿಗೂ ಸರಿಯಾಗಿ ಅರ್ಥವಾಗಿ, ತಮ್ಮ 'ಡೊಂಕುಬಾಲ' ಸರಿ ಮಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ಹೇಳಿದ್ದೇನೆ.
ಜೈ ಶ್ರೀರಾಮ್.
- ಲಕ್ಷ್ಮಣ ಆಕಾಶೆ, ಕಾರ್ಕಳ.