Sri Abhinava Vidyatirtha Multi Speciality Hospital, Sringeri

Sri Abhinava Vidyatirtha Multi Speciality Hospital, Sringeri Contact information, map and directions, contact form, opening hours, services, ratings, photos, videos and announcements from Sri Abhinava Vidyatirtha Multi Speciality Hospital, Sringeri, Medical and health, PB No 13, Vidyaranyapura village, Sringeri.

Sri Abhinava Vidyatirtha Multi Speciality Hospital offers comprehensive healthcare under one roof with modern facilities, expert doctors, and a patient-first approach across specialties like Medicine, Surgery, Pediatrics, Gynecology & Orthopedics.

21/08/2026

ಶೃಂಗೇರಿಯಲ್ಲೇ ಕಾಲಿನ ಮೂಳೆ ಮುರಿತಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ!

ಬೆಂಗಳೂರಿನಿಂದ ಶೃಂಗೇರಿಗೆ ಆಗಮಿಸಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರ ಫ್ರ್ಯಾಕ್ಚರ್‌ಗೆ ಒಳಗಾಗಿದ್ದ ಸಂತೋಷ್ ಅವರಿಗೆ, ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಸಕಾಲದಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖರನ್ನಾಗಿಸಿದ್ದಾರೆ.

ವೈದ್ಯರಾದ ಡಾ. ಅಭಿಷೇಕ್ ಯಾದವ್ ಹಾಗೂ ಸಿಬ್ಬಂದಿಯ ಕಾಳಜಿ ಮತ್ತು ಅತ್ಯುತ್ತಮ ಸೇವೆಯ ಬಗ್ಗೆ ಸಂತೋಷ್ ಅವರು ಹಂಚಿಕೊಂಡ ಅನುಭವದ ಮಾತುಗಳು ಇಲ್ಲಿದೆ.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ
ವಿದ್ಯಾರಣ್ಯಪುರ ಹಳ್ಳಿ, ಶೃಂಗೇರಿ – 577139
ಸಂಪರ್ಕಿಸಿ: 6364 327 544
ವೆಬ್‌ಸೈಟ್: https://www.savmhospital.com

20/08/2026

ಸುಲಭ ಹಾಗೂ ಸುರಕ್ಷಿತ ನಾರ್ಮಲ್ ಡೆಲಿವರಿ!

ಗರ್ಭಾವಸ್ಥೆಯ ಆರಂಭದಿಂದ ಹೆರಿಗೆಯವರೆಗೂ ಸರಿಯಾದ ಮಾರ್ಗದರ್ಶನ ಮತ್ತು ಉತ್ತಮ ಆರೈಕೆ ಸಿಕ್ಕರೆ ನಾರ್ಮಲ್ ಡೆಲಿವರಿ ಅತ್ಯಂತ ಸುಲಭ ಹಾಗೂ ಆತಂಕವಿಲ್ಲದೆ ಸಾಧ್ಯ. ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ಕಾಳಜಿ ಹಾಗೂ ಸಿಬ್ಬಂದಿಯ ಬೆಂಬಲದಿಂದ ಸರಳವಾಗಿ ನಾರ್ಮಲ್ ಡೆಲಿವರಿ ಆದ ಬಗ್ಗೆ ತಾಯಿ ಪ್ರಣವಿ ಅವರು ತಮ್ಮ ನೈಜ ಅನುಭವವನ್ನು ಹಂಚಿಕೊಂಡಿದ್ದಾರೆ.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ
ವಿದ್ಯಾರಣ್ಯಪುರ ಹಳ್ಳಿ, ಶೃಂಗೇರಿ – 577139
ಸಂಪರ್ಕಿಸಿ: 6364 327 544
ವೆಬ್‌ಸೈಟ್: https://www.savmhospital.com

ದಕ್ಷಿಣಾಮ್ನಾಯ ಶ್ರೀ ಶಾರದಾಪೀಠ, ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ 34ನೇ ವರ್ಧಂತಿ ಮಹೋತ್ಸವದ ಭಕ್...
17/08/2026

ದಕ್ಷಿಣಾಮ್ನಾಯ ಶ್ರೀ ಶಾರದಾಪೀಠ, ಶೃಂಗೇರಿ

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ 34ನೇ ವರ್ಧಂತಿ ಮಹೋತ್ಸವದ ಭಕ್ತಿಪೂರ್ವಕ ಪ್ರಣಾಮಗಳು!

> ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ ।
> ವಂದೇ ವೇದಾಂತ ತತ್ತ್ವಜ್ಞಂ ವಿಧುಶೇಖರ ಭಾರತೀಮ್ ॥

ಜ್ಞಾನ, ಕರುಣೆ ಹಾಗೂ ಸನಾತನ ಧರ್ಮದ ದಿವ್ಯ ಮಾರ್ಗದರ್ಶಕರಾದ ಸದ್ಗುರುಗಳ ಪಾವನ ಪಾದಾರವಿಂದಗಳಿಗೆ ಅನಂತ ಪ್ರಣಾಮಗಳು.

ಜಗದ್ಗುರುಗಳ ಅನುಗ್ರಹ ಸದಾ ಎಲ್ಲರ ಮೇಲಿರಲಿ

14/08/2026

ಸಾಮಾನ್ಯರಿಗೂ ಕೈಗೆಟುಕುವ ವೈದ್ಯಕೀಯ ಸೇವೆ!

ನಮ್ಮ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿಗೆ ಪ್ರಸಿದ್ಧ ವೈದ್ಯಕೀಯ ತಜ್ಞರಾದ ಹಾಗೂ ಬೆಂಗಳೂರಿನ ಸಮತ್ವಂ ಡಯಾಬಿಟಿಸ್ ಸೆಂಟರ್‌ನ ಮುಖ್ಯಸ್ಥರಾದ ಡಾ. ಎಸ್. ಶ್ರೀಕಂಠ ಅವರು ಆಗಮಿಸಿದ್ದರು. ಅವರ ನೇತೃತ್ವದಲ್ಲಿ ದೇಶದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ ವಿವಿಧ ಪರಿಣಿತ ವೈದ್ಯರ ತಂಡ ವಿಶೇಷ ಭೇಟಿ ನೀಡಿತು.

ಶೃಂಗೇರಿಯಂತಹ ಮಲೆನಾಡಿನ ಭಾಗದಲ್ಲಿ ನೀಡಲಾಗುತ್ತಿರುವ ಆರೋಗ್ಯ ಸೌಲಭ್ಯಗಳು, ಅತ್ಯಂತ ಕಡಿಮೆ ವೆಚ್ಚದ ಡಯಾಲಿಸಿಸ್ ಹಾಗೂ ಗ್ರಾಮೀಣ ಜನರಿಗೆ ಸಿಗುತ್ತಿರುವ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಕಂಡು ಡಾ. ಎಸ್. ಶ್ರೀಕಂಠ ಹಾಗೂ ವೈದ್ಯರ ತಂಡದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ
ವಿದ್ಯಾರಣ್ಯಪುರ ಹಳ್ಳಿ, ಶೃಂಗೇರಿ – 577139
ಸಂಪರ್ಕಿಸಿ: 6364 327 544 ವೆಬ್‌ಸೈಟ್: https://www.savmhospital.com

13/08/2026

ಅಮ್ಮನ ಗರ್ಭಕೋಶದಲ್ಲಿನ ಗೆಡ್ಡೆ ಶಸ್ತ್ರಚಿಕಿತ್ಸೆ ಯಶಸ್ವಿ!

ಕುಟುಂಬದಲ್ಲಿದ್ದ ದೊಡ್ಡ ಆತಂಕವನ್ನು ನಿವಾರಿಸಿ, ಅಮ್ಮನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿ ಆರೈಕೆ ಮಾಡಿದ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧನ್ಯವಾದ ಅರ್ಪಿಸಿದ ಮಗ ಅಭಿಲಾಷ್!

ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯದ ರಕ್ಷಣೆಗೆ ನಾವು ಸದಾ ಸಿದ್ಧ.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ
ಸಂಪರ್ಕಿಸಿ: 6364 327 544
ವೆಬ್‌ಸೈಟ್: https://www.savmhospital.com
ವಿದ್ಯಾರಣ್ಯಪುರ ಹಳ್ಳಿ, ಶೃಂಗೇರಿ – 577139

11/08/2026

ಶೃಂಗೇರಿಯಲ್ಲಿ ಈಗ ಅತ್ಯುತ್ತಮ ಹೆರಿಗೆ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯ!

ಸಹಜ ಪ್ರಸವಕ್ಕೆ ಪ್ರಾಧಾನ್ಯತೆ ನೀಡುವ ನಮ್ಮ ಊರಿನ ಹೆಮ್ಮೆಯ ಆಸ್ಪತ್ರೆ.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಹಜ ಪ್ರಸವದ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂದಿತಾ ಅವರ ಅನುಭವದ ಮಾತುಗಳು.

ಇಕ್ಟೋಪಿಕ್ ಪ್ರೆಗ್ನೆನ್ಸಿ (Ectopic Pregnancy) ಯಂತಹ ಸಂಕೀರ್ಣ ಸ್ಥಿತಿಯಲ್ಲೂ ಸೂಕ್ತ ತುರ್ತು ಚಿಕಿತ್ಸೆ ನೀಡಿ, ಸಹಜ ಪ್ರಸವವಾಗುವಂತೆ ಕಾಳಜಿವಹಿಸಿದ ನಮ್ಮ ಅನುಭವಿ ವೈದ್ಯರ ತಂಡ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೃತಜ್ಞತೆಗಳು.

ತಾಯಿ ಮತ್ತು ಮಗುವಿನ ಅತ್ಯುತ್ತಮ ಆರೈಕೆ ಹಾಗೂ ಸಂಪೂರ್ಣ ಸುರಕ್ಷತೆಗೆ ನಮ್ಮ ಆಸ್ಪತ್ರೆ ಸದಾ ಸಿದ್ಧ.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ
ಸಂಪರ್ಕಿಸಿ: 6364 327 544
ವೆಬ್‌ಸೈಟ್: https://www.savmhospital.com
ವಿದ್ಯಾರಣ್ಯಪುರ ಹಳ್ಳಿ, ಶೃಂಗೇರಿ – 577139

07/08/2026

ಮೊಬೈಲ್ ಆಸ್ಪತ್ರೆಯ ಸೇವೆ ನಿಜಕ್ಕೂ ಶ್ಲಾಘನೀಯ.

ಜೆ.ಸಿ.ಬಿ.ಎಂ. ಕಾಲೇಜಿನ ಉಪನ್ಯಾಸಕರು, ಭಾರತಿ ತೀರ್ಥ ಮೊಬೈಲ್ ಆಸ್ಪತ್ರೆ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಲಾದ ಆರೋಗ್ಯ ಶಿಬಿರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅವರಿರುವ ಸ್ಥಳದಲ್ಲೇ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವ ಈ ಪ್ರಯತ್ನ ಶ್ಲಾಘನೀಯವಾಗಿದ್ದು, ಇಂತಹ ಆರೋಗ್ಯ ಶಿಬಿರಗಳು ಸಮಾಜಕ್ಕೆ ಅತ್ಯಂತ ಉಪಯುಕ್ತವೆಂದು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಜನರ ಆರೋಗ್ಯವೇ ನಮ್ಮ ಆದ್ಯತೆ ಎಂಬ ಧ್ಯೇಯದೊಂದಿಗೆ ಸೇವೆ ಸಲ್ಲಿಸುತ್ತಿರುವ ಭಾರತಿ ತೀರ್ಥ ಮೊಬೈಲ್ ಆಸ್ಪತ್ರೆ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ
ಸಂಪರ್ಕಿಸಿ: 6364 327 544
ವೆಬ್‌ಸೈಟ್: https://www.savmhospital.com
ವಿದ್ಯಾರಣ್ಯಪುರ ಹಳ್ಳಿ, ಶೃಂಗೇರಿ – 577139

06/08/2026

ನೋವಿನಿಂದ ನೆಮ್ಮದಿಯತ್ತ... ಒಂದು ವಿಶ್ವಾಸದ ಪಯಣ!

ಶ್ರೀ ಪ್ರದೀಪ್ ಅವರು ಈ ವಿಡಿಯೋದಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಂಗ ಸಂಸ್ಥೆಯಾದ ಭಾರತಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಅಡ್ವಾನ್ಸ್ಡ್ ಫಿಸಿಯೋಥೆರಪಿ ಮತ್ತು ಆಟಿಸಂ ರಿಹ್ಯಾಬಿಲಿಟೇಶನ್, ಶೃಂಗೇರಿಯ ಹಿರಿಯ ಫಿಸಿಯೋಥೆರಪಿಸ್ಟ್, ಪೌಷ್ಟಿಕ ತಜ್ಞೆ ಹಾಗೂ ವಿಶೇಷ ಶಿಕ್ಷಕಿ ಡಾ. ಶ್ರೀ ಕಲ್ಯಾಣಿ. ಇ ಅವರ ಫಿಸಿಯೋಥೆರಪಿ ಚಿಕಿತ್ಸೆಯಿಂದ ಪಡೆದ ಉತ್ತಮ ಫಲಿತಾಂಶ ಮತ್ತು ತಮ್ಮ ಅನುಭವವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಸರಿಯಾದ ಚಿಕಿತ್ಸೆ, ವೈಯಕ್ತಿಕ ಆರೈಕೆ ಹಾಗೂ ತಜ್ಞರ ಮಾರ್ಗದರ್ಶನದಿಂದ ನೋವಿಗೆ ವಿದಾಯ ಹೇಳಿ, ಆರೋಗ್ಯಕರ ಜೀವನದತ್ತ ಹೆಜ್ಜೆ ಇಡಿ.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ
ಸಂಪರ್ಕಿಸಿ: 6364 327 544
ವೆಬ್‌ಸೈಟ್: https://www.savmhospital.com
ವಿದ್ಯಾರಣ್ಯಪುರ ಹಳ್ಳಿ, ಶೃಂಗೇರಿ – 577139

06/08/2026

ಜೆಸಿಬಿಎಂ ಕಾಲೇಜು, ಶೃಂಗೇರಿಯಲ್ಲಿ ಭಾರತಿ ತೀರ್ಥ ಮೊಬೈಲ್ ಆಸ್ಪತ್ರೆ!

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಇನ್ನಷ್ಟು ಹತ್ತಿರ ತಲುಪಿಸುವ ಉದ್ದೇಶದಿಂದ ಭಾರತಿ ತೀರ್ಥ ಮೊಬೈಲ್ ಆಸ್ಪತ್ರೆ ಜೆಸಿಬಿಎಂ ಕಾಲೇಜಿನಲ್ಲಿ ಯಶಸ್ವಿಯಾಗಿ ಆರೋಗ್ಯ ಶಿಬಿರವನ್ನು ಆಯೋಜಿಸಿತು.

ಈ ವಿಡಿಯೋದಲ್ಲಿ ಮೊಬೈಲ್ ಆಸ್ಪತ್ರೆಯ ಉಪಯುಕ್ತತೆ, ವಿದ್ಯಾರ್ಥಿಗಳಿಗೆ ದೊರೆತ ಆರೋಗ್ಯ ತಪಾಸಣೆಯ ಸೌಲಭ್ಯಗಳು ಹಾಗೂ ಇಂತಹ ಶಿಬಿರಗಳು ಸಮಾಜದ ಆರೋಗ್ಯ ಕಾಳಜಿಯಲ್ಲಿ ವಹಿಸುವ ಮಹತ್ವದ ಪಾತ್ರದ ಬಗ್ಗೆ ತಿಳಿದುಕೊಳ್ಳಿ.

ಆರೋಗ್ಯ ಸೇವೆ ಎಲ್ಲರಿಗೂ ಸುಲಭವಾಗಿ ತಲುಪಲಿ ಎಂಬ ನಮ್ಮ ಸಂಕಲ್ಪಕ್ಕೆ ನಿಮ್ಮ ಬೆಂಬಲ ಇರಲಿ.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ
ಸಂಪರ್ಕಿಸಿ: 6364 327 544
ವೆಬ್‌ಸೈಟ್: https://www.savmhospital.com
ವಿದ್ಯಾರಣ್ಯಪುರ ಹಳ್ಳಿ, ಶೃಂಗೇರಿ – 577139

Address

PB No 13, Vidyaranyapura Village
Sringeri
577139

Alerts

Be the first to know and let us send you an email when Sri Abhinava Vidyatirtha Multi Speciality Hospital, Sringeri posts news and promotions. Your email address will not be used for any other purpose, and you can unsubscribe at any time.

Shortcuts

Share