07/09/2026
ಆದರ್ಶ ಚಾರಿಟೇಬಲ್ ಟ್ರಸ್ಟ್ (ರಿ.), ಆದರ್ಶ ಸಮೂಹ ಸಂಸ್ಥೆಗಳು, ಆದರ್ಶ ಆಸ್ಪತ್ರೆ, ಉಡುಪಿ ಮತ್ತು ಶಾಲಾ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಡಾ || ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜನ್ಮಜಯಂತಿ ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ 39 ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಉಡುಪಿ ಚಿಕ್ಕಮಗಳೂರು ಕ್ಷೇತ್ರ, ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವರು, ಕರ್ನಾಟಕ ಸರ್ಕಾರ, ಪ್ರತೀಕ್ ಬಾಯಲ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿಲ್ಲಾ ಪಂಚಾಯತ್, ಉಡುಪಿ, ಅಬಿದ್ ಗದ್ಯಾಳ್, ಅಪರ ಜಿಲ್ಲಾಧಿಕಾರಿಗಳು ಉಡುಪಿ, ಲೋಕೆಶ್ ಸಿ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಉಡುಪಿ, ಡಾ ಜಿ.ಎಸ್. ಚಂದ್ರಶೇಖರ್ ವೈದ್ಯಕೀಯ ನಿರ್ದೇಶಕರು, ಆದರ್ಶ ಆಸ್ಪತ್ರೆ ಉಡುಪಿ ಮತ್ತು ಅಧ್ಯಕ್ಷರು, ಆದರ್ಶ ಸಮೂಹ ಸಂಸ್ಥೆಗಳು, ಉಡುಪಿ, ಹಾಗೂ ಶ್ರೀಮತಿ ವಿಮಲಾ ಚಂದ್ರಶೇಖರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಆದರ್ಶ ಆಸ್ಪತ್ರೆ ಉಡುಪಿ ಮತ್ತು ಉಪಾಧ್ಯಕ್ಷರು, ಆದರ್ಶ ಸಮೂಹ ಸಂಸ್ಥೆಗಳು, ಉಡುಪಿ ಇವರು ಉಪಸ್ಥಿತರಿದ್ದರು.